ಚಿತ್ರದುರ್ಗ: ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಬರುವ ವಿವಿಧ ವಸತಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಜೂನ್ 15ರಂದು ತರಗತಿ ಪ್ರಾತ್ಯಕ್ಷಿಕೆ (Demo Class) ಆಯೋಜಿಸಲಾಗಿದೆ. 2026-27ನೇ ಶೈಕ್ಷಣಿಕ ಸಾಲಿನ ನೇಮಕಾತಿ ಪ್ರಕ್ರಿಯೆ ಇದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಈ ಪ್ರಕ್ರಿಯೆ ನಡೆಯಲಿದೆ.

ಅಭ್ಯರ್ಥಿಗಳು ತರಬೇಕಾದ ಮೂಲ ದಾಖಲೆಗಳು (Original Documents):
- ಪದವಿ (Degree) ಅಂಕಪಟ್ಟಿಗಳು
- ಬಿ.ಇಡಿ (B.Ed) ಅಂಕಪಟ್ಟಿಗಳು
- ಟಿ.ಇ.ಟಿ (TET) ಉತ್ತೀರ್ಣ ಪ್ರಮಾಣಪತ್ರ
- ಅನುಭವ/ಸೇವಾ ಪ್ರಮಾಣಪತ್ರ (ಇದ್ದಲ್ಲಿ)
ಗಮನಿಸಿ: ಅಭ್ಯರ್ಥಿಗಳು 2026ರ ಜೂನ್ 15ರ ಸೋಮವಾರ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಆಯಾ ವಿಷಯಗಳಿಗೆ ನಿಗದಿಪಡಿಸಿದ ವಸತಿ ಶಾಲೆಗಳಿಗೆ ನೇರವಾಗಿ ಹಾಜರಾಗಬೇಕು.
विषಯವಾರು ಪ್ರಾತ್ಯಕ್ಷಿಕೆ ನಡೆಯುವ ಸ್ಥಳಗಳ ವಿವರ:
| ವಿಷಯಗಳು | ಪ್ರಾತ್ಯಕ್ಷಿಕೆ ನಡೆಯುವ ಸ್ಥಳ (ಕೇಂದ್ರ) |
|---|---|
| ಗಣಿತ, ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಹಿಂದಿ | ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೂಳಯ್ಯನಹಟ್ಟಿ (ಸಾಮಾನ್ಯ-24) |
| ಇಂಗ್ಲಿಷ್, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ | ಇಂದಿರಾ ಗಾಂಧಿ ವಸತಿ ಶಾಲೆ, ಸೀಬಾರ (ತುರುವನೂರು ರಸ್ತೆ), ಎನ್.ಹೆಚ್-4 ಕೇತೇಶ್ವರ ಮಠದ ಹತ್ತಿರ, ಚಿತ್ರದುರ್ಗ (ಪ. ವರ್ಗ-59) |
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
