ಇಂದಿನ ರಾಶಿ ಭವಿಷ್ಯ (06-02-2026): ಈ ರಾಶಿಯವರಿಗೆ ಭೂ ವ್ಯವಹಾರದಲ್ಲಿ ಭರ್ಜರಿ ಲಾಭ!

Author Picture
Published On: February 6, 2026
dina bhavishya ದಿನ ಭವಿಷ್ಯ

—Advertisement—

ಇಂದಿನ ರಾಶಿ ಭವಿಷ್ಯ (ದಿನ ಭವಿಷ್ಯ06-02-2026): ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಫಲಗಳೇನು? ಯಾರಿಗೆ ರಾಜಯೋಗ? ಯಾರಿಗೆ ಭೂ ವ್ಯವಹಾರದಲ್ಲಿ ಭರ್ಜರಿ ಲಾಭ? ನಿಮ್ಮ ಇಂದಿನ ಅದೃಷ್ಟ ಸಂಖ್ಯೆ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ.

✨ ಇಂದಿನ ದಿನ ಭವಿಷ್ಯ ✨

📅 06 ಫೆಬ್ರವರಿ 2026

ಇಂದಿನ ಗ್ರಹಗತಿಗಳ ಪ್ರಕಾರ ನಿಮ್ಮ ರಾಶಿಗೆ ಶುಭವಾಗಿದೆಯೇ? ವ್ಯಾಪಾರ, ಆರೋಗ್ಯ ಮತ್ತು ಕೌಟುಂಬಿಕ ವಿಚಾರದಲ್ಲಿ ಇಂದಿನ ಫಲಗಳು ಇಲ್ಲಿವೆ.

♈ ಮೇಷ ರಾಶಿ

ವೃತ್ತಿ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಿರಿಯರ ಮಾತನ್ನು ಕೇಳದೆ ಹಳಿ ತಪ್ಪಿದ್ದ ಸಂಸಾರ ಈಗ ಸರಿದಾರಿಗೆ ಬರುವ ಹಂತದಲ್ಲಿದೆ.

ಅದೃಷ್ಟ ಸಂಖ್ಯೆ: 3

♉ ವೃಷಭ ರಾಶಿ

ವಿವಾಹಾಕಾಂಕ್ಷಿಗಳಿಗೆ ಗುರುಬಲವಿದ್ದು ಶುಭ ಸುದ್ದಿ ಇದೆ. ಅಕ್ಕಪಕ್ಕದವರೊಂದಿಗೆ ವಿನಾಕಾರಣ ಕಲಹ ಮಾಡಬೇಡಿ. ಸಾಂಸಾರಿಕ ಮನಸ್ತಾಪಗಳು ದೂರವಾಗಲಿವೆ.

ಅದೃಷ್ಟ ಸಂಖ್ಯೆ: 1

♊ ಮಿಥುನ ರಾಶಿ

ಕಷ್ಟಕರ ಕೆಲಸಗಳನ್ನು ಆತ್ಮವಿಶ್ವಾಸದಿಂದ ಪೂರೈಸುವಿರಿ. ಹೊಸ ವ್ಯಾಪಾರಕ್ಕೆ ಬೆಂಬಲ ಸಿಗಲಿದೆ. ರಾಹು-ಶನಿ ಪ್ರಭಾವದಿಂದ ಕೆಲವು ಅನಿರೀಕ್ಷಿತ ತಿರುವುಗಳಿವೆ.

ಅದೃಷ್ಟ ಸಂಖ್ಯೆ: 4

♋ ಕರ್ಕಾಟಕ ರಾಶಿ

ದಾಂಪತ್ಯದಲ್ಲಿ ಎಚ್ಚರಿಕೆಯ ನಿರ್ಣಯ ಅಗತ್ಯ. ಚಿನ್ನಾಭರಣ ಖರೀದಿಗೆ ಮುಂದಾಗುವಿರಿ. ಸ್ವಯಂಕೃತ ಅಪರಾಧಗಳಿಂದ ಧನ ನಷ್ಟವಾಗುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ: 2

♌ ಸಿಂಹ ರಾಶಿ

ಮಕ್ಕಳ ಜವಾಬ್ದಾರಿ ಕಂಡು ಸಂತೋಷಪಡುವಿರಿ. ರಾಜಕೀಯದಲ್ಲಿ ಸಕ್ರಿಯರಾಗುವ ಯೋಗವಿದೆ. ನಿಮ್ಮ ಕಟುವಾದ ಮಾತು ಶತ್ರುಗಳ ಸಂಖ್ಯೆಯನ್ನು ಹೆಚ್ಚಿಸಬಹುದು.

ಅದೃಷ್ಟ ಸಂಖ್ಯೆ: 9

♍ ಕನ್ಯಾ ರಾಶಿ

ಸಜ್ಜನರ ಸಹವಾಸದಿಂದ ಜೀವನ ಶೈಲಿ ಬದಲಾಗಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವಾದರೂ ಮನಸ್ಸಿಗೆ ನೆಮ್ಮದಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಅದೃಷ್ಟ ಸಂಖ್ಯೆ: 5

♎ ತುಲಾ ರಾಶಿ

ಗುರುವಿನ ಅನುಗ್ರಹದಿಂದ ಸಹೋದರರ ಸಹಾಯ ಸಿಗಲಿದೆ. ಸ್ವಂತ ಉದ್ಯಮಗಳಿಗೆ ಇದು ಯಶಸ್ವಿನ ಸಮಯ. ಪ್ರೀತಿ ಪಾತ್ರರ ಭಾವನೆಗಳನ್ನು ಗೌರವಿಸಿ.

ಅದೃಷ್ಟ ಸಂಖ್ಯೆ: 7

♏ ವೃಶ್ಚಿಕ ರಾಶಿ

ಹಿರಿಯರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಮಕ್ಕಳ ಕಡೆ ಗಮನವಿರಲಿ. ವ್ಯಾಪಾರ ವಿಸ್ತರಣೆಗೆ ಸೂಕ್ತ ಸಮಯ. ಕಳೆದುಕೊಂಡ ಹಣ ಕೈ ಸೇರಲಿದೆ.

ಅದೃಷ್ಟ ಸಂಖ್ಯೆ: 3

♐ ಧನು ರಾಶಿ

ಭೂ ವ್ಯವಹಾರದಲ್ಲಿ (Real Estate) ಭರ್ಜರಿ ಲಾಭ. ದಾಖಲೆ ಪತ್ರಗಳ ಬಗ್ಗೆ ಎಚ್ಚರವಿರಲಿ. ಆರ್ಥಿಕ ನಷ್ಟವಾಗುವ ಸಂಭವವಿದ್ದು ಜಾಗ್ರತೆ.

ಅದೃಷ್ಟ ಸಂಖ್ಯೆ: 1

♑ ಮಕರ ರಾಶಿ

ತನ್ನವರನ್ನೇ ವ್ಯಂಗ್ಯವಾಡುವ ಸ್ವಭಾವ ಬಿಡಿ. ದಾಂಪತ್ಯದಲ್ಲಿ ಕಠಿಣ ನಿಲುವು ಬೇಡ. ಹಿರಿಯರ ಸಲಹೆ ಪಡೆಯಿರಿ.

ಅದೃಷ್ಟ ಸಂಖ್ಯೆ: 5

♒ ಕುಂಭ ರಾಶಿ

ಬೆಂಕಿ ಅಥವಾ ಆಯುಧಗಳ ವಿಷಯದಲ್ಲಿ ಎಚ್ಚರ. ತಾಯಿಯ ಕಡೆಯವರಿಂದ ಧನ ಸಹಾಯ. ಕೃಷಿಯಲ್ಲಿ ಲಾಭ. ವಿದೇಶ ಪ್ರವಾಸದ ಯೋಗವಿದೆ.

ಅದೃಷ್ಟ ಸಂಖ್ಯೆ: 8

♓ ಮೀನ ರಾಶಿ

ಉತ್ತಮ ಆರ್ಥಿಕ ಸೌಲಭ್ಯ ಹೊಂದುವ ಸಮಯ. ರಾಜಕೀಯ, ವೈದ್ಯಕೀಯ ಕ್ಷೇತ್ರ ಹಾಗೂ ಕಬ್ಬಿನ ವ್ಯಾಪಾರಿಗಳಿಗೆ ಉತ್ತಮ ಲಾಭ ಕಾದಿದೆ.

ಅದೃಷ್ಟ ಸಂಖ್ಯೆ: 3

ಸೂಚನೆ: ಈ ರಾಶಿ ಫಲಗಳು ಗ್ರಹಗತಿಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಗಳು ಬದಲಾಗಬಹುದು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp