ಹರಿಹರ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಈಗ ಭಿನ್ನಮತ ಸ್ಫೋಟಗೊಂಡಿದೆ. “ನನ್ನನ್ನು ಪೀಠದಿಂದ ಕೆಳಗಿಳಿಸಲು ಸಂಚು ನಡೆಯುತ್ತಿದೆ. ಆದರೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಟ್ರಸ್ಟಿಗಳೇ ಮೊದಲು ಮಠ ಬಿಟ್ಟು ತೊಲಗಲಿ” ಎಂದು ವಚನಾನಂದ ಸ್ವಾಮೀಜಿ ಗುಡುಗಿದ್ದಾರೆ.
ಸೋಮವಾರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಲೆಕ್ಕಪತ್ರ ಮಂಡನೆ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠದ ಆಡಳಿತ ಮಂಡಳಿಯ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದರು.
ವರದಿಯ ಮುಖ್ಯಾಂಶಗಳು:
-
₹10 ಕೋಟಿ ಅನುದಾನ ದುರ್ಬಳಕೆ: ಮಠದ ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರ ನೀಡಿದ್ದ 10 ಕೋಟಿ ರೂಪಾಯಿ ಹಣವನ್ನು ಟ್ರಸ್ಟಿಗಳು ನಕಲಿ ಸಹಿ ಹಾಕಿ ಲಪಟಾಯಿಸಿದ್ದಾರೆ ಎಂದು ಶ್ರೀಗಳು ನೇರ ಆರೋಪ ಮಾಡಿದ್ದಾರೆ.
-
ಲೆಕ್ಕ ಕೇಳಿದ್ದಕ್ಕೆ ಸಂಚು: “ಮಠದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ನನ್ನನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಹಿಂದೆ ಮಹಂತ ಶಿವಾಚಾರ್ಯ ಶ್ರೀಗಳಿಗೂ ಇದೇ ರೀತಿ ಅನ್ಯಾಯವಾಗಿತ್ತು” ಎಂದು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.
-
ಶೂನ್ಯದಿಂದ ಮಠ ಕಟ್ಟಿದ್ದೇನೆ: ಎಂಟು ವರ್ಷಗಳ ಹಿಂದೆ ಮಠಕ್ಕೆ ಬಂದಾಗ ಇಲ್ಲಿ ಏನೂ ಇರಲಿಲ್ಲ. ಇಂದು ಸಾವಿರಾರು ಭಕ್ತರು ಮಠಕ್ಕೆ ಬರುತ್ತಿದ್ದಾರೆ ಎಂದರೆ ಅದಕ್ಕೆ ನನ್ನ ಪರಿಶ್ರಮ ಕಾರಣ. ಲಕ್ಷಾಂತರ ಭಕ್ತರ ಬೆಂಬಲ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-
ಅಹಂಕಾರದ ಪರಮಾವಧಿ: “ಒಮ್ಮೆಯೂ ಪಾದಪೂಜೆಗೆ ಕರೆಯದ ಟ್ರಸ್ಟ್ ಸದಸ್ಯರಿಗೆ ಅಹಂಕಾರ ಹೆಚ್ಚಾಗಿದೆ. ಮಠದಲ್ಲಿ ಅಧ್ಯಾತ್ಮ, ಅಕ್ಷರ ಮತ್ತು ಅನ್ನದಾಸೋಹ ನಡೆಯಬೇಕೇ ಹೊರತು ರಾಜಕೀಯವಲ್ಲ” ಎಂದು ಕಿಡಿಕಾರಿದರು.
ಮಠದಲ್ಲಿ ಬಿಗುವಿನ ವಾತಾವರಣ:
ಲೆಕ್ಕಪತ್ರ ಮಂಡನೆ ಸಭೆಯ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಹೈಡ್ರಾಮಾ ನಡೆದಿದೆ. ಸ್ವಾಮೀಜಿ ಪರ ಭಕ್ತರು ಹಾಗೂ ಟ್ರಸ್ಟ್ ಸದಸ್ಯರ ಬೆಂಬಲಿಗರ ನಡುವೆ ವಾಕ್ಸಮರ ನಡೆದಿದ್ದು, ಪರಿಸ್ಥಿತಿ ಕೈಮೀರುವ ಮುನ್ನ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
