ಕರ್ನಾಟಕ ಭೂ ಒಡೆತನ ಯೋಜನೆ 2026: ರಾಜ್ಯದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಕರ್ನಾಟಕ ಸರ್ಕಾರವು ಹೊಸ ವರ್ಷದ ಭರ್ಜರಿ ಸಿಹಿಸುದ್ದಿ ನೀಡಿದೆ. ತಲೆಮಾರುಗಳಿಂದ ಪರರ ಜಮೀನಿನಲ್ಲಿ ದುಡಿಯುತ್ತಿದ್ದ ಮಹಿಳೆಯರು ಈಗ ತಾವೇ ಭೂ ಒಡೆಯರಾಗುವ ಸುವರ್ಣಾವಕಾಶ ಒದಗಿ ಬಂದಿದೆ. ‘ಭೂ ಒಡೆತನ ಯೋಜನೆ 2026’ರ ಅಡಿಯಲ್ಲಿ ಸರ್ಕಾರವು ಸಹಾಯಧನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಕೃಷಿ ಭೂಮಿ ಖರೀದಿಸಲು ಭಾರಿ ನೆರವು ಘೋಷಿಸಿದೆ.
ಯೋಜನೆಯ ಸಂಪೂರ್ಣ ವಿವರ:
ಈ ಯೋಜನೆಯು ಮುಖ್ಯವಾಗಿ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಭೂಹೀನ ಮಹಿಳೆಯರಿಗಾಗಿ ರೂಪಿಸಲಾಗಿದೆ. ಈ ಯೋಜನೆಯಡಿ ಫಲಾನುಭವಿಗಳು ತಮಗಿಷ್ಟ ಬಂದ ಕೃಷಿ ಭೂಮಿಯನ್ನು ಖರೀದಿಸಬಹುದು.
1. ಎಷ್ಟು ಹಣ ಸಿಗಲಿದೆ?
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
-
ಬೆಂಗಳೂರು ಭಾಗ: ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜಮೀನು ಖರೀದಿಸಲು 25 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ 12.5 ಲಕ್ಷ ರೂ. ಉಚಿತ ಸಬ್ಸಿಡಿ ಹಾಗೂ 12.5 ಲಕ್ಷ ರೂ. ಸಾಲ ಸೌಲಭ್ಯವಿರುತ್ತದೆ.
-
ಇತರೆ ಜಿಲ್ಲೆಗಳು: ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ (ಮಧ್ಯ ಕರ್ನಾಟಕ ಸೇರಿದಂತೆ) ಒಟ್ಟು 20 ಲಕ್ಷ ರೂಪಾಯಿ ಮೊತ್ತ ನೀಡಲಾಗುತ್ತದೆ. ಇದರಲ್ಲಿ 10 ಲಕ್ಷ ರೂ. ಸಬ್ಸಿಡಿ ಹಾಗೂ 10 ಲಕ್ಷ ರೂ. ಸಾಲ ಇರುತ್ತದೆ.
2. ಸಾಲ ಮರುಪಾವತಿ ಹೇಗೆ?
ಸರ್ಕಾರ ನೀಡುವ ಸಾಲಕ್ಕೆ ಕೇವಲ ಶೇ. 6 ರಷ್ಟು ಅತ್ಯಲ್ಪ ಬಡ್ಡಿ ಇರುತ್ತದೆ. ಈ ಸಾಲವನ್ನು ತೀರಿಸಲು ಸರ್ಕಾರ 10 ವರ್ಷಗಳ ಸುದೀರ್ಘ ಕಾಲಾವಕಾಶ ನೀಡಿದ್ದು, ಫಲಾನುಭವಿಗಳು 20 ಕಂತುಗಳಲ್ಲಿ ಹಣ ಪಾವತಿಸಬಹುದು.
3. ಎಷ್ಟು ಜಮೀನು ಖರೀದಿಸಬಹುದು?
-
ಮಳೆ ಆಶ್ರಿತ ಖುಷ್ಕಿ ಭೂಮಿಯಾದರೆ: ಕನಿಷ್ಠ 2 ಎಕರೆ.
-
ನೀರಾವರಿ ಸೌಲಭ್ಯದ ತರಿ ಭೂಮಿಯಾದರೆ: ಕನಿಷ್ಠ 1 ಎಕರೆ.
-
ತೋಟಗಾರಿಕೆ ಭೂಮಿಯಾದರೆ: ಕನಿಷ್ಠ 20 ಗುಂಟೆ (ಅರ್ಧ ಎಕರೆ).
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
-
ಅರ್ಜಿದಾರರು SC ಅಥವಾ ST ಸಮುದಾಯದ ಮಹಿಳೆಯಾಗಿರಬೇಕು.
-
ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಸ್ವಂತ ಕೃಷಿ ಜಮೀನು ಇರಬಾರದು.
-
ಜಮೀನು ಮಾರಾಟ ಮಾಡುವವರು SC/ST ಸಮುದಾಯದವರಾಗಿರಬಾರದು.
-
ಜಮೀನು ಅರ್ಜಿದಾರರ ನಿವಾಸದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಇರಬೇಕು.
ಅಗತ್ಯವಿರುವ ದಾಖಲೆಗಳು:
-
ಲೇಟೆಸ್ಟ್ ಪಾಸ್‌ಪೋರ್ಟ್ ಸೈಜ್ ಫೋಟೋ.
-
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್.
-
ಜಾತಿ ಮತ್ತು ಆದಾಯ ಪ್ರಮಾಣಪತ್ರ (RD ಸಂಖ್ಯೆ ಇರಬೇಕು).
-
ತಹಶೀಲ್ದಾರರಿಂದ ಪಡೆದ ‘ಭೂಹೀನ ಪ್ರಮಾಣಪತ್ರ’.
-
ಬ್ಯಾಂಕ್ ಪಾಸ್‌ಬುಕ್ ಪ್ರತಿ.
-
ಜಮೀನಿನ ದಾಖಲೆಗಳು (EC, ವಂಶಾವಳಿ, ಮತ್ತು ಮಾಲೀಕರ ಒಪ್ಪಿಗೆ ಪತ್ರ).
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಸರ್ಕಾರದ ಅಧಿಕೃತ ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸಿಗುವ ಅಕ್ನಾಲೆಜ್ಮೆಂಟ್ ಪ್ರತಿಯನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುವುದು ಅವಶ್ಯಕ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಬಹುದು.
ವಿಶೇಷ ಸೂಚನೆ: ಜಮೀನು ಖರೀದಿಸಿದ ನಂತರ ನೀರಾವರಿ ಸೌಲಭ್ಯಕ್ಕಾಗಿ ಸರ್ಕಾರವು ‘ಗಂಗಾ ಕಲ್ಯಾಣ ಯೋಜನೆ’ಯಡಿ ಉಚಿತವಾಗಿ ಬೋರ್‌ವೆಲ್ ಕೊರೆಸಿಕೊಡುವ ಸೌಲಭ್ಯವನ್ನೂ ನೀಡಲಿದೆ.
ಬ್ರೇಕಿಂಗ್ ನ್ಯೂಸ್
ದಾವಣಗೆರೆ ಉಪಚುನಾವಣೆ
ಮುಂದಿನ ಶಾಸಕರು ಯಾರು? ನಿಮ್ಮ ಮತ ಚಲಾಯಿಸಿ!
ಶ್ರೀನಿವಾಸ್ ದಾಸ್ ಕರಿಯಪ್ಪ
ಸಮರ್ಥ್ ಶಾಮನೂರು
ಲೈವ್ ಫಲಿತಾಂಶಗಳು
✓ ನಿಮ್ಮ ಮತ ಯಶಸ್ವಿಯಾಗಿ ದಾಖಲಾಗಿದೆ!
ಒಟ್ಟು ಚಲಾವಣೆಯಾದ ಮತಗಳು: 0
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
