,

ರೈತರಿಗಾಗಿ ಬಂತು AI ಕರೆ ಕೇಂದ್ರ ಮತ್ತು ‘ವಸುಧಾಮೃತ’ ಯೋಜನೆ; ಕೃಷಿ ಬಜೆಟ್‌ನ ಆಕರ್ಷಕ ಘೋಷಣೆಗಳ ಪಟ್ಟಿ ಇಲ್ಲಿದೆ

ಸಿದ್ದರಾಮಯ್ಯ ಬಜೆಟ್ 2026ರ ಕೃಷಿ ಯೋಜನೆಗಳಾದ ವಸುಧಾಮೃತ ಮತ್ತು ಮಿಲೆಟ್ ಹಬ್ ಸಾಂಕೇತಿಕ ಚಿತ್ರ.
— ರೈತರ ಆರ್ಥಿಕ ಪ್ರಗತಿಗೆ ಪೂರಕವಾದ 2026ರ ಕೃಷಿ ಬಜೆಟ್ ಘೋಷಣೆಗಳು.

—Advertisement—

CM Siddaramaiah
🔴 LIVE UPDATES

ಸಿದ್ಧು ಬಜೆಟ್ 2026

ಮಧ್ಯ ಕರ್ನಾಟಕದ ನಿರೀಕ್ಷೆಗಳು ಮತ್ತು ಲೈವ್ ಮುಖ್ಯಾಂಶಗಳು

ಲೈವ್ ವೀಕ್ಷಿಸಿ

ಸಂಕ್ಷಿಪ್ತ ಮಾಹಿತಿ: ₹100 ಕೋಟಿ ವೆಚ್ಚದ ‘ಸಿಎಂ ಕೃಷಿ ವಿಸ್ತಾರ’ ಯೋಜನೆ, ಎಐ ಕರೆ ಕೇಂದ್ರ, ಮಿಲೆಟ್ ಹಬ್ ಮತ್ತು ಚಿತ್ರದುರ್ಗದ ಕೇಂದ್ರ ಉನ್ನತೀಕರಣ ಸೇರಿ ಹತ್ತು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ಅನ್ನದಾತನಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಹತ್ತಾರು ಕ್ರಾಂತಿಕಾರಿ ಯೋಜನೆಗಳನ್ನು ಘೋಷಿಸಿದ್ದಾರೆ. ತಂತ್ರಜ್ಞಾನದ ಬಳಕೆಯಿಂದ ಹಿಡಿದು ಮಣ್ಣಿನ ಆರೋಗ್ಯದವರೆಗೆ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಕೃಷಿ ಬಜೆಟ್‌ನ 10 ಪ್ರಮುಖ ಘೋಷಣೆಗಳು

1. ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: ಕೃಷಿ ತ್ಯಾಜ್ಯಗಳ ಮರುಬಳಕೆ ಮತ್ತು ಮಾರುಕಟ್ಟೆ ಸಂಪರ್ಕ ಬಲಪಡಿಸಲು ₹100 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಲಿದೆ.
2. ಎಐ (AI) ಆಧಾರಿತ ರೈತ ಕರೆ ಕೇಂದ್ರ: ರೈತರ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಪರಿಹಾರ ನೀಡಲು ಕೃತಕ ಬುದ್ಧಿಮತ್ತೆ ಆಧಾರಿತ ವಿಶೇಷ ಕರೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
3. ಮಣ್ಣಿನ ಆರೋಗ್ಯಕ್ಕೆ ‘ವಸುಧಾಮೃತ’: ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
4. ಕೋಲಾರದಲ್ಲಿ ‘ರೈತ ಮಾಲ್’: ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳು ಒಂದೇ ಸೂರಿನಡಿ ದೊರೆಯುವಂತೆ ಮಾಡಲು ಕೋಲಾರದಲ್ಲಿ ಎಂಎಸ್‌ಐಎಲ್ ಮೂಲಕ ‘ರೈತ ಮಾಲ್’ ಸ್ಥಾಪನೆಯಾಗಲಿದೆ.
5. ಮಿಲೆಟ್ ಹಬ್ ಸ್ಥಾಪನೆ: ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಹಾಗೂ ರಫ್ತಿಗೆ ಉತ್ತೇಜನ ನೀಡಲು ರಾಜ್ಯದಲ್ಲಿ ವಿಶೇಷ ಹಬ್ ನಿರ್ಮಾಣವಾಗಲಿದೆ.
6. ಪಾಂಡವಪುರ ಸಾವಯವ ತಾಲ್ಲೂಕು: ಮಂಡ್ಯದ ಪಾಂಡವಪುರವನ್ನು ರಾಜ್ಯದ ಮೊದಲ ‘ಸಂಪೂರ್ಣ ಸಾವಯವ ತಾಲ್ಲೂಕಾಗಿ’ ಪರಿವರ್ತಿಸಲು ನಿರ್ಧರಿಸಲಾಗಿದೆ.
7. ಚಿತ್ರದುರ್ಗ ಕೇಂದ್ರ ಉನ್ನತೀಕರಣ: ಚಿತ್ರದುರ್ಗದ ಕೃಷಿ ಕೇಂದ್ರವನ್ನು ‘ರಾಜ್ಯಮಟ್ಟದ ಕೃಷಿ ಉದ್ದಿಮೆ ತರಬೇತಿ ಕೇಂದ್ರವನ್ನಾಗಿ’ ಮೇಲ್ದರ್ಜೆಗೇರಿಸಲಾಗುವುದು.
8. ಅಥಣಿಯಲ್ಲಿ ಕೃಷಿ ಕಾಲೇಜು: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.
9. ಖೋಟಾ ಬೀಜ ಜಾಲಕ್ಕೆ ಬ್ರೇಕ್: ರೈತರಿಗೆ ಮೋಸ ಮಾಡುವ ನಕಲಿ ಬೀಜ ಮತ್ತು ಕೀಟನಾಶಕ ಜಾಲಗಳನ್ನು ಮಟ್ಟಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
10. ಹೈಟೆಕ್ ಹಾರ್ವೆಸ್ಟರ್ ಹಬ್: ರೈತರಿಗೆ ಅತ್ಯಾಧುನಿಕ ಯಂತ್ರೋಪಕರಣಗಳ ಬಾಡಿಗೆ ಸೌಲಭ್ಯ ನೀಡಲು ಹೊಸ ಯಂತ್ರಗಳನ್ನು ಸೇರ್ಪಡಿಸಲಾಗುವುದು.

ಬಜೆಟ್‌ನ ಈ ನಿರ್ಧಾರಗಳಿಂದಾಗಿ ಕೃಷಿ ವಲಯದಲ್ಲಿ ಆಧುನಿಕತೆಯ ಸ್ಪರ್ಶ ದೊರೆಯಲಿದ್ದು, ರೈತರ ಆದಾಯ ಹೆಚ್ಚಿಸಲು ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

ಸಿದ್ಧು ಬಜೆಟ್ 2026
Home
Web Stories
Instagram
WhatsApp