ತುರುವನೂರು ಸರ್ಕಾರಿ ಪಿಯು ಕಾಲೇಜು: ಶೇ.93.24 ಫಲಿತಾಂಶ

​Top performing students and Principal Dr. B. Krishnappa of Thuruvanuru Government PU College celebrating 93.24% result in 2026 2nd PUC exams.

—Advertisement—

ಚಿತ್ರದುರ್ಗ: 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 74 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ ಶೇ.93.24 ಫಲಿತಾಂಶ ದಾಖಲಿಸಿದೆ.

ಕಲಾ ವಿಭಾಗದಲ್ಲಿ ಪಿ.ವಾಣಿ 578 ಅಂಕಗಳೊಂದಿಗೆ ಶೇ. 96.33, ವಿಜ್ಞಾನ ವಿಭಾಗದಲ್ಲಿ ಟಿ.ಲಾವಣ್ಯ 571 ಅಂಕಗಳೊಂದಿಗೆ ಶೇ.95.16, ಸಿ.ಡಿ. ಲಕ್ಷ್ಮೀ 569 ಅಂಕಗಳೊಂದಿಗೆ ಶೇ. 94.83 ಗಳನ್ನು ಗಳಿಸಿರುತ್ತಾರೆ. ಇದರೊಂದಿಗೆ ಒಟ್ಟು 15 ಅತ್ಯುನ್ನತ ಶ್ರೇಣಿ, 51 ಉನ್ನತ ಶ್ರೇಣಿ 5 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸಮಯೋಚಿತ ವಾರ್ಷಿಕ ಕ್ರಿಯಾಯೋಜನೆ, ನಿರಂತರ ಮಾರ್ಗದರ್ಶನ, ಫೋಷಕರ ಸಂಪರ್ಕ, ಪೋಷಕರ ಸಭೆಗಳು ಉಪನ್ಯಾಸಕರೊಂದಿಗೆ ಪ್ರತಿ ವಿದ್ಯಾರ್ಥಿಗಳ ಮನೆ-ಮನೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ವೈಯಕ್ತಿಕ ಅಧ್ಯಯನ, ಘಟಕ ಪರೀಕ್ಷೆ ಮತ್ತು ಕಿರು ಪರೀಕ್ಷೆಗಳಲ್ಲಿ, ವಿದ್ಯಾರ್ಥಿಗಳು ಮಾಡುವಂತ ತಪ್ಪುಗಳನ್ನು ನಿರಂತರವಾಗಿ ತಿದ್ದುತ್ತಾ ಮಾರ್ಗದರ್ಶನ ನೀಡಿದರು. ಇಲಾಖೆಯು ನಡೆಸಿದ ಎರಡು ಪೂರ್ವಸಿದ್ದತಾ ಪರೀಕ್ಷೆಯ ಜೊತೆಗೆ ಕಾಲೇಜಿನ ಹಂತದಲ್ಲಿ ಎರಡು ಪೂರ್ವಸಿದ್ದತಾ ಪರೀಕ್ಷೆಗಳನ್ನು ನಡೆಸಲಾಯಿತು, ಪ್ರಯುಕ್ತ ಈ ಒಂದು ಫಲಿತಾಂಶಕ್ಕೆ ಬರಲು ಸಾಧ್ಯವಾಯಿತು ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೃಷ್ಣಪ್ಪ ತಿಳಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp