ಚಿತ್ರದುರ್ಗ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಚಿತ್ರದುರ್ಗ ಆಕಾಶವಾಣಿ ಕೇಂದ್ರವು (ಎಫ್.ಎಂ) ವಿಶೇಷ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
1. ಎಸ್ಎಸ್ಎಲ್ಸಿ ಪರೀಕ್ಷಾ ನೇರ ಫೋನ್-ಇನ್
ಪರೀಕ್ಷಾ ಸಿದ್ಧತೆ ಮತ್ತು ವಿದ್ಯಾರ್ಥಿಗಳ ಗೊಂದಲಗಳಿಗೆ ಪರಿಹಾರ ನೀಡಲು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- ದಿನಾಂಕ: ಮಾರ್ಚ್ 12, 2026
- ಸಮಯ: ಬೆಳಿಗ್ಗೆ 10:05 ರಿಂದ 11:05 ರವರೆಗೆ
- ಭಾಗವಹಿಸುವವರು: ಎಂ.ಆರ್. ಮಂಜುನಾಥ್ (DDPI), ಮೊಹಮ್ಮದ್ ಇನಾಯತ್ ಉಲ್ಲಾ (ಶಿಕ್ಷಣಾಧಿಕಾರಿ), ಕೆ.ಜಿ. ಪ್ರಶಾಂತ್ (ವಿಷಯ ಪರಿವೀಕ್ಷಕರು)
9448640273, 9141970272, 08194-295649
2. ಸಾಹಿತ್ಯ ಸಪ್ತ ಸ್ವರ ನೇರ ಸಂವಾದ
ಅಂದೇ ರಾತ್ರಿ ಚಿತ್ರದುರ್ಗದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ವಿಶೇಷ ಸಂವಾದ ನಡೆಯಲಿದೆ.
- ವಿಷಯ: ಚಿತ್ರದುರ್ಗ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ
- ಸಮಯ: ರಾತ್ರಿ 9:15 ಕ್ಕೆ
- ಅತಿಥಿ: ಜಿ.ಡಿ. ಚಿತ್ತಣ್ಣ ಸೀಗೆಹಟ್ಟಿ (ಹಿರಿಯ ಉಪನ್ಯಾಸಕರು)
- ಸಂದರ್ಶಕರು: ಡಾ. ನವೀನ್ ಮಸ್ಕಲ್
ಈ ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ಕೇಳಲು ಆಸಕ್ತರು ‘News on Air’ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
