ಚಿತ್ರದುರ್ಗ: ಜಿಲ್ಲೆಯ ರೈತ ಬಾಂಧವರಿಗೆ ಕೃಷಿ ಇಲಾಖೆಯು ಮಹತ್ವದ ಸೂಚನೆಯೊಂದನ್ನು ನೀಡಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಸೇರಿದಂತೆ ಇತರೆ ಯಾವುದೇ ರಸಗೊಬ್ಬರಗಳನ್ನು ಖರೀದಿಸಬೇಕಾದರೆ ರೈತರು ಕಡ್ಡಾಯವಾಗಿ ‘ಫ್ರೂಟ್ಸ್ ಎಫ್ಐಡಿ’ (FRUITS FID) ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಇಲಾಖೆ ತಿಳಿಸಿದೆ.
ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಕೃಷಿ ಇಲಾಖೆಯು ಕೇಂದ್ರ ಸರ್ಕಾರದ ತಂತ್ರಾಂಶದ ಸಹಯೋಗದೊಂದಿಗೆ ಹೊಸ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸಿದೆ. ಈ ಹೊಸ ವ್ಯವಸ್ಥೆಯು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದೆ.
ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ಗೊಬ್ಬರ ವಿತರಣೆ
ಹೊಸ ನಿಯಮದ ಪ್ರಕಾರ, ರೈತರ ಎಫ್ಐಡಿ ಸಂಖ್ಯೆಯನ್ನು ಬಳಸಿಕೊಂಡು ಅವರ ಜಮೀನಿನ ಒಟ್ಟು ವಿಸ್ತೀರ್ಣ (ಎಕರೆ) ಮತ್ತು ಅವರು ಭೂಮಿಯಲ್ಲಿ ಬೆಳೆದಿರುವ ಬೆಳೆಗಳ ಆಧಾರದ ಮೇಲೆ ಎಷ್ಟು ರಸಗೊಬ್ಬರ ಅಗತ್ಯವಿದೆ ಎಂಬುದನ್ನು ತಂತ್ರಾಂಶವೇ ಸ್ವಯಂಚಾಲಿತವಾಗಿ ಲೆಕ್ಕ ಹಾಕುತ್ತದೆ. ಅದರಂತೆ, ನಿಯಮಾನುಸಾರ ಅನುಮೋದಿಸಲಾದ ನಿಗದಿತ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಪಡೆಯಲು ರೈತರಿಗೆ ಅವಕಾಶವಿರುತ್ತದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ರೈತರು ಏನು ಮಾಡಬೇಕು?
ಹೊಸ ನೋಂದಣಿ: ಜಿಲ್ಲೆಯ ಎಲ್ಲಾ ರೈತರು ಆದ್ಯತೆಯ ಮೇರೆಗೆ ತಮ್ಮ ಹೆಸರಿನಲ್ಲಿ ತಕ್ಷಣವೇ ‘ಫ್ರೂಟ್ಸ್ ಎಫ್ಐಡಿ’ ಮಾಡಿಸಿಕೊಳ್ಳಬೇಕು.
ಸರ್ವೆ ನಂಬರ್ ಜೋಡಣೆ: ರೈತರು ತಮ್ಮ ಒಡೆತನದ ಎಲ್ಲಾ ಜಮೀನಿನ ಸರ್ವೆ ನಂಬರ್ಗಳನ್ನು ಈ ಎಫ್ಐಡಿಗೆ ಕಡ್ಡಾಯವಾಗಿ ಲಿಂಕ್ ಮಾಡಿಸಬೇಕಾಗುತ್ತದೆ.
ಇ-ಕೆವೈಸಿ ಕಡ್ಡಾಯ: ಈಗಾಗಲೇ ಫ್ರೂಟ್ಸ್ ಎಫ್ಐಡಿ ಹೊಂದಿರುವ ರೈತರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು.
ರೈತರು ಸಕಾಲದಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಮುಗಿಸಿಕೊಳ್ಳುವುದರಿಂದ ರಸಗೊಬ್ಬರ ಖರೀದಿಸುವಾಗ ಎದುರಾಗಬಹುದಾದ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳನ್ನು ತಪ್ಪಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
