ದಾವಣಗೆರೆ: ಸಂಸಾರವೆಂಬ ನೌಕೆಯಲ್ಲಿ ಸಣ್ಣಪುಟ್ಟ ಬಿರುಕು ಮೂಡಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳ ಬಾಳಿನಲ್ಲಿ ಲೋಕ ಅದಾಲತ್ ಹೊಸ ಬೆಳಕು ಮೂಡಿಸಿದೆ. ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಈ ವಿಶೇಷ ಅದಾಲತ್ನಲ್ಲಿ ಬರೋಬ್ಬರಿ 37 ಜೋಡಿಗಳು ತಮ್ಮ ಹಳೆಯ ಕಹಿ ನೆನಪುಗಳನ್ನು ಮರೆತು ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ.
ನ್ಯಾಯಾಲಯದಲ್ಲಿ ಹೊಸ ಜೀವನದ ಆರಂಭ
ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿ ದೂರವಾಗಿದ್ದ ದಂಪತಿಗಳನ್ನು ನ್ಯಾಯಾಧೀಶರು ಮತ್ತು ವಕೀಲರು ಸುದೀರ್ಘವಾಗಿ ಮನವೊಲಿಸುವಲ್ಲಿ ಯಶಸ್ವಿಯಾದರು. ಕಹಿಯನ್ನೆಲ್ಲ ಮರೆತು ಇಂದಿನಿಂದ ಹೊಸ ಜೀವನ ಆರಂಭಿಸುವುದಾಗಿ ಅವರು ಪ್ರಮಾಣ ಮಾಡಿದರು. ವಿಶೇಷವೆಂದರೆ, ಒಂದೇ ಕುಟುಂಬದ ಇಬ್ಬರು ಅಕ್ಕ-ತಂಗಿಯರು ಮತ್ತು ಅಣ್ಣ-ತಮ್ಮಂದಿರ ಜೋಡಿಯೂ ಈ ಅದಾಲತ್ ಮೂಲಕ ಪುನರ್ಮಿಲನಗೊಂಡಿದೆ.
“ಮೂರನೇ ವ್ಯಕ್ತಿಯ ಮಾತಿಗೆ ಕಿವಿಗೊಡಬೇಡಿ”
ಒಂದಾದ ದಂಪತಿಗಳಲ್ಲಿ ಒಬ್ಬರು ತಮ್ಮ ಅನುಭವ ಹಂಚಿಕೊಳ್ಳುತ್ತಾ, “ನಾವು ಮೂರನೇ ವ್ಯಕ್ತಿಗಳ ಮಾತಿಗೆ ಕಿವಿಗೊಟ್ಟು ಇಷ್ಟು ವರ್ಷದ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದೆವು. ದಯವಿಟ್ಟು ಯಾರೂ ಮೂರನೇ ವ್ಯಕ್ತಿಗಳಿಗೆ ಅವಕಾಶ ನೀಡಬೇಡಿ, ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ” ಎಂದು ಭಾವುಕರಾಗಿ ಮನವಿ ಮಾಡಿದರು.
ಬೃಹತ್ ಯಶಸ್ಸು ಕಂಡ ಅದಾಲತ್
ಜಿಲ್ಲೆಯಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಈ ಲೋಕ ಅದಾಲತ್ನಲ್ಲಿ ಕೇವಲ ಕೌಟುಂಬಿಕ ಕಲಹ ಮಾತ್ರವಲ್ಲದೆ, ವಿವಿಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳೂ ಸೇರಿದಂತೆ ಒಟ್ಟು 6,818 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
