ಇನ್ಕಮ್ ಟ್ಯಾಕ್ಸ್ ನಿಯಮ: ನೀವು ಬ್ಯಾಂಕ್ನಲ್ಲಿ ಹಣ ಜಮಾ ಮಾಡುತ್ತೀರಾ? ಅಥವಾ ಸೈಟ್, ಮನೆ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮಗಾಗಿ ಬಹಳ ಮುಖ್ಯವಾಗಿದೆ. ಬರುವ ಏಪ್ರಿಲ್ 1, 2026 ರಿಂದ ಕೇಂದ್ರ ಸರ್ಕಾರದ ಹೊಸ ಆದಾಯ ತೆರಿಗೆ ಕಾಯ್ದೆ (New Income Tax Act) ಜಾರಿಗೆ ಬರಲಿದ್ದು, ನಗದು ವ್ಯವಹಾರಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.
1. ಉಳಿತಾಯ ಖಾತೆಯಲ್ಲಿ ನಗದು ಜಮಾ ಮಿತಿ (Cash Deposit Limit)
ಹೊಸ ನಿಯಮದ ಪ್ರಕಾರ, ನಿಮ್ಮ ಉಳಿತಾಯ ಖಾತೆಗೆ (Savings Account) ಪ್ಯಾನ್ ಕಾರ್ಡ್ ಇದ್ದರೆ ವರ್ಷಕ್ಕೆ ಗರಿಷ್ಠ 10 ಲಕ್ಷ ರೂಪಾಯಿ ಮಾತ್ರ ನಗದು ಜಮಾ ಮಾಡಬಹುದು. ಒಂದು ವೇಳೆ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಈ ಮಿತಿ ಕೇವಲ 5 ಲಕ್ಷ ರೂಪಾಯಿಗೆ ಸೀಮಿತವಾಗಿರುತ್ತದೆ. ಇನ್ನು ಚಾಲ್ತಿ ಖಾತೆದಾರರಿಗೆ (Current Account) ವರ್ಷಕ್ಕೆ 50 ಲಕ್ಷ ರೂಪಾಯಿ ನಗದು ಜಮಾವಣೆ ಮಾಡಲು ಅವಕಾಶವಿದೆ.
2. ನಗದು ಹಿಂಪಡೆಯುವಿಕೆ ಮತ್ತು ಟಿಡಿಎಸ್ (TDS Rules)
ನೀವು ಸತತವಾಗಿ ಇನ್ಕಮ್ ಟ್ಯಾಕ್ಸ್ ರಿಟರ್ನ್ (ITR) ಫೈಲ್ ಮಾಡದವರಾಗಿದ್ದರೆ, ವರ್ಷಕ್ಕೆ 20 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಹಿಂಪಡೆದಾಗ ಶೇ. 2 ರಷ್ಟು ಟಿಡಿಎಸ್ ಕಟ್ ಆಗುತ್ತದೆ. ಒಂದು ವೇಳೆ 1 ಕೋಟಿ ದಾಟಿದರೆ ಶೇ. 5 ರಷ್ಟು ಟಿಡಿಎಸ್ ಕಡಿತಗೊಳ್ಳಲಿದೆ. ಐಟಿಆರ್ ಫೈಲ್ ಮಾಡುವವರಿಗೆ 1 ಕೋಟಿವರೆಗೆ ಯಾವುದೇ ಟಿಡಿಎಸ್ ಇರುವುದಿಲ್ಲ.
3. ಆಸ್ತಿ ಖರೀದಿ ಮಾಡುವಾಗ ಎಚ್ಚರ!
ಸೈಟ್ ಅಥವಾ ಮನೆ ಖರೀದಿಸುವಾಗ ಟೋಕನ್ ಹಣ ಅಥವಾ ಒಪ್ಪಂದದ ಹಣವಾಗಿ 20,000 ರೂಪಾಯಿಗಿಂತ ಹೆಚ್ಚು ನಗದು ನೀಡುವಂತಿಲ್ಲ. ಒಂದು ವೇಳೆ ಈ ಮಿತಿ ಮೀರಿದರೆ, ನೀವು ನೀಡಿದ ಪೂರ್ಣ ಮೊತ್ತದಷ್ಟೇ (100%) ದಂಡವನ್ನು ಐಟಿ ಇಲಾಖೆ ವಿಧಿಸಬಹುದು.
4. ಕೈಸಾಲ ಮತ್ತು ಮರುಪಾವತಿ
ಸ್ನೇಹಿತರು ಅಥವಾ ಸಂಬಂಧಿಕರಿಂದ 20,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ‘ಕೈಸಾಲ’ವಾಗಿ ನಗದು ರೂಪದಲ್ಲಿ ಪಡೆಯುವಂತಿಲ್ಲ. ಹಾಗೆಯೇ ಸಾಲವನ್ನು ಮರುಪಾವತಿ ಮಾಡುವಾಗಲೂ ಡಿಜಿಟಲ್ ಪಾವತಿಯನ್ನೇ ಬಳಸಬೇಕು.
5. ಮನೆ ಬಾಡಿಗೆ ಅಡ್ವಾನ್ಸ್ (Security Deposit)
ಮನೆ ಅಥವಾ ಕಮರ್ಷಿಯಲ್ ಮಳಿಗೆಗಳನ್ನು ಬಾಡಿಗೆಗೆ ಪಡೆಯುವಾಗ ನೀಡುವ ಸೆಕ್ಯೂರಿಟಿ ಡೆಪಾಸಿಟ್ ಕೂಡ 20,000 ರೂಪಾಯಿಗಿಂತ ಹೆಚ್ಚಿದ್ದರೆ ನಗದು ರೂಪದಲ್ಲಿ ನೀಡುವಂತಿಲ್ಲ. ಬಾಡಿಗೆದಾರರು ಖಾಲಿ ಮಾಡುವಾಗ ಮಾಲೀಕರು ಹಣ ವಾಪಸ್ ನೀಡುವಾಗಲೂ ಇದೇ ನಿಯಮ ಅನ್ವಯಿಸುತ್ತದೆ.
6. ವ್ಯಾಪಾರಸ್ಥರಿಗೆ ಹೊಸ ರೂಲ್ಸ್
ಯಾವುದೇ ಬಿಸಿನೆಸ್ ಮಾಡುವವರು ಒಬ್ಬ ವ್ಯಕ್ತಿಗೆ ಒಂದೇ ದಿನದಲ್ಲಿ 10,000 ರೂಪಾಯಿಗಿಂತ ಹೆಚ್ಚು ನಗದು ಪಾವತಿ ಮಾಡಿದರೆ, ಅದನ್ನು ಉದ್ಯಮದ ಖರ್ಚು ಎಂದು ಪರಿಗಣಿಸಲಾಗುವುದಿಲ್ಲ.
7. ಅಘೋಷಿತ ಹಣಕ್ಕೆ ಶೇ. 84 ರಷ್ಟು ದಂಡ!
ಬ್ಯಾಂಕ್ಗೆ ಜಮಾ ಮಾಡಿದ ಹಣಕ್ಕೆ ನೀವು ಸರಿಯಾದ ಮೂಲ ಅಥವಾ ವಿವರಣೆ ನೀಡದಿದ್ದರೆ, ಅದನ್ನು ‘ವಿವರಿಸಲಾಗದ ನಗದು’ ಎಂದು ಪರಿಗಣಿಸಿ ಒಟ್ಟು ಮೊತ್ತದ ಮೇಲೆ ಭಾರಿ ದಂಡ ವಿಧಿಸಲಾಗುತ್ತದೆ.
8. ಆಧಾರ್ ಮೂಲಕ ಟ್ರ್ಯಾಕಿಂಗ್
ಬರಿ ಪ್ಯಾನ್ ಕಾರ್ಡ್ ಮಾತ್ರವಲ್ಲ, ಆಧಾರ್ ಕಾರ್ಡ್ ಮೂಲಕ ನಿಮ್ಮ ಪ್ರತಿಯೊಂದು ಬ್ಯಾಂಕ್ ವ್ಯವಹಾರವನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಸರ್ಕಾರಕ್ಕಿದೆ. ಎಐ (AI) ತಂತ್ರಜ್ಞಾನದ ಮೂಲಕ ತೆರಿಗೆ ವಂಚಕರನ್ನು ಸುಲಭವಾಗಿ ಪತ್ತೆಹಚ್ಚಲಾಗುತ್ತಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
